Samskrutika Sanje – 2009
ಆನಂದ ಬಳಗ (ರಿ)
ಸಾಂಸ್ಕೃತಿಕ ಸಂಜೆಯ ಪ್ರತಿಭಾ ಪರಿಷೆ
ಆನಂದ ಬಳಗದ ಸಾಂಸ್ಕೃತಿಕ ವಿಭಾಗವು ನಗರದ ಪುರಭವನದಲ್ಲಿ ದಿನಾಂಕ ೬-೧೨-೨೦೦೯ ರಂದು ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವು ಶ್ರೀಮತಿ ಕಸ್ತೂರಿ ಐತಾಳ್ ಆವರ ದಕ್ಷ ಸಂಯೋಜನೆಯಲ್ಲಿ ಬಹಳ ಅದ್ದೂರಿಯಾಗಿ ನೆರೆವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಕಲಾ ರಸಿಕರು ಹಾಗು ಪುರಭವನದ ಸಭಿಕರ ಮೊಗದಲ್ಲಿದ್ದ ಹರ್ಷೋಲ್ಲಾಸ ಸಾಂಸ್ಕೃತಿಕ ಸಂಜೆಯ ವೈಭವವನ್ನು ಪ್ರತಿಬಿಂಬಿಸುತಿತ್ತು.
ಆನಂದ ಬಳಗದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಹಾಗು ಶ್ರೀ ಗುರುರಾಜ ಕಲ್ಯಾಣ ಮಂಟಪದ ಮಾಲೀಕರಾದ ಶ್ರೀ ವಾದಿರಾಜ್ ರಾವ್ ಅವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಳಗದ ಮಾಜಿ ಅಧ್ಯಕ್ಷರುಗಳಾದ ಶ್ರೀ ಸದಾನಂದ ಮಡಿ ಹಾಗು ಶ್ರೀ ಎಸ್. ಟಿ. ಆರ್. ಮಡಿ, ಕಾರ್ಯದರ್ಶಿ ವಿಜಯಲಕ್ಷ್ಮಿ ಭಟ್ ಹಾಗು ಸಾಂಸ್ಕೃತಿಕ ವಿಭಾಗದ ಅಧ್ಯಕ್ಷೆ ಶ್ರೀಮತಿ ಕಸ್ತೂರಿ ಐತಾಳ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆದಿತ್ಯ ಕಾವೂರ್ ಹಾಗು ಸಹನ ಭಟ್ ಅರಂಭದಿಂದ ಕೊನೆಯ ಶಾಂತಿ ಮಂತ್ರದವರೆಗೆ ಕಾರ್ಯಕ್ರಮದ ನಿರೂಪಣೆಯಲ್ಲಿ ಮಿಂಚಿದರು. ಶ್ರೀಮತಿ ಮಂಜುಳ ಗುರುರಾಜ್ ಅವರು ತಮ್ಮ ಸುಶ್ರಾವ್ಯ ಕಂಠದಿಂದ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಎನ್. ವಿ. ಜಿ. ಕೆ. ಭಟ್ ನೆರೆದ ಅತಿಥಿಗಳು ಹಾಗು ಸಭಿಕರೆಲ್ಲರಿಗೂ ಸ್ವಾಗತ ಕೋರಿದರು. ಶ್ರೀ ಶರತ್ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಶ್ರೀ ಎಸ್. ಟಿ. ಆರ್. ಮಡಿಯವರು ಮುಖ್ಯ ಅತಿಥಿಗಳಿಗೆ ಮಾಲಾರ್ಪಣೆ ಮಾಡಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.
ನಮ್ಮ ಬಳಗದ ಎಲ್ಲಾ ಸದಸ್ಯರ ಪ್ರತಿಭೆಯನ್ನು ಹೊರತರುವ ಯುವ ಪ್ರತಿಭಾ ಸ್ಪರ್ಧೆ ದಿನಾಂಕ ೮-೧೧-೨೦೦೯ ರಂದು ಕೆಂಪೇಗೌಡ ರಸ್ತೆಯಲ್ಲಿರುವ ಹರೇ ರಾಮ್ ಹೊಟೆಲ್ ನ ವೈಷ್ಣವಿ ಹಾಲ್ ನಲ್ಲಿ ನಡೆಯಿತು. ಏಕಪಾತ್ರಭಿನಯ, ಆಶುಭಾಷಣ, ದೇವರನಾಮ, ಭಾವಗೀತೆ, ದಂಪತಿಗಳಿಗೆ ರಸಪ್ರಷ್ನೆ ಇಂತಹ ಸ್ಪರ್ಧೆಗಳು ತೀವ್ರ ಪೈಪೋಟಿಯಿಂದ ಸ್ಪರ್ಧಿಸಲಾಯಿತು. ಅದರಲ್ಲಿ ವಿಜೇತರಾದವರ ಹೆಸರನ್ನು ಶ್ರೀಮತಿ ಶೋಭಾ ರಾಧಾಕೃಷ್ಣ ಅವರು ಓದುತ್ತಿದ್ದಂತೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿ ಅಭಿನಂದಿಸಿದರು. ನಂತರ ಮಾತನಾಡಿದ ಮುಖ್ಯ ಅತಿಥಿಗಳು ಆನಂದ ಬಳಗವು ಇನ್ನೂ ಹಲವಾರು ವಿಭಾಗಳನ್ನು ಸ್ಥಾಪಿಸಿ ಅವುಗಳ ಮೂಲಕ ಮತ್ತಷ್ಟು ಸದಸ್ಯರಿಗೆ ಬಳಗದ ಸೇವೆ ತಲುಪುವಂತೆ ಆಗಲೆಂದು ಅಭಿಪ್ರಾಯ ಪಟ್ಟರು. ಬಳಗದ ಮಾಜಿ ಅಧ್ಯಕ್ಷರಾದ ಶ್ರೀ ಎಸ್. ಟಿ. ಆರ್. ಮಡಿಯವರು ಮಾತನಾಡಿ ಬಳಗದ ಪ್ರಗತಿಪರ ಸಾಧನೆಗಳನ್ನು ಸಭಾಸದರ ಮುಂದಿಟ್ಟರು. ಆನಂದ ಬಳಗದ ಹಾಗು ಆನಂದ ಸದನದ ಏಳಿಗೆಗಾಗಿ ತನು-ಮನ-ಧನದ ರೀತಿಯಲ್ಲಿ ಸಹಾಯ ಮಾಡಿದ ಎಲ್ಲಾ ಸದಸ್ಯರನ್ನು ಅಭಿನಂದಿಸುತ್ತಾ ಸಾಂಸ್ಕೃತಿಕ ಸಂಜೆಯ ಯಶಸ್ಸಿಗೆ ಶ್ರಮ ವಹಿಸಿದವರಿಗೆ ಸ್ಪೂರ್ಥಿಯ ಮಾತುಗಳನ್ನಾಡುವುದರ ಜೊತೆಗೆ ಪ್ರಾಯೊಜಕರಿಗೆ ಪುಷ್ಪ ಗುಚ್ಚಗಳನ್ನು ನೀಡಿ ಗೌರವಿಸಿದರು. ಕೊನೆಯಲ್ಲಿ ಶ್ರೀ ಕಿರಣ್ ಕೆ. ಎಸ್. ಅವರ ವಂದನಾರ್ಪಣೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು.
ಗಣ್ಯರು ವೇದಿಕೆಯನ್ನು ತೆರವುಗೋಳಿಸುತ್ತಿದ್ದಂತೆ ಸಭಿಕರರು ಕಾತುರರಾಗಿ ಕಾಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವು, ಸಹೋದರ-ಸಹೋದರಿ ಜೋಡಿ ಶ್ರೀ ಟಿ. ಎನ್. ಉದಯಕೃಷ್ಣ ಉಪಾಧ್ಯಾಯ ಹಾಗೂ ಶ್ರೀಮತಿ ದೀಪಾ ಸುಧೀಂದ್ರಕುಮಾರ್ ಅವರ ಗಣೇಶ ವಂದನೆ ನೃತ್ಯದೊಂದಿಗೆ ಆರಂಭವಾಯಿತು. ಪ್ರತಿಭಾ ಮೇಳದ ವಿಜೇತರಾದ ಶ್ರೀಮತಿ ಶ್ರೀಲಕ್ಷ್ಮಿ ದಾಸ್ ಅವರ ದೇವರನಾಮ, ಶ್ರೀಮತಿ ವಿದ್ಯಾ ಕಾವೂರ್ ಅವರ ಏಕಪಾತ್ರಾಭಿನಯ ಹಾಗು ಕುಮಾರಿ ವೈಷ್ಣವಿ ಆಚರ್ ಅವರ ಭಾವಗೀತೆ ಜನರ ಪ್ರಶಂಸೆಗೆ ಒಳಗಾದವು.
ಒಂದೇ ನೃತ್ಯದಲ್ಲಿ ಶ್ರೀ ಕೃಷ್ಣನನ್ನು ಸ್ಮರಿಸಿ ಸೊಗಸಾದ ಅಭಿನಯದೊಂದಿಗೆ ತಾವೇ ನೃತ್ಯ ನಿರ್ದೇಶನ ಮಾಡಿ ನರ್ತಿಸಿದರು ಶ್ರೀಮತಿ ಸಂಗೀತ ಶ್ರೀಪತಿ ಹಾಗು ಕುಮಾರಿ ವರ್ಣಾ ಕೆ. ಆರ್. ನೃತ್ಯ ಗಾಯನಗಳ ನಡುವೆ ಇಡೀ ಪುರಭವನದಲ್ಲಿ ನಗೆಯ ಅಲೆಯನು ಹರಿಸಿದರು ದೇವರಾಜ್ ಕರಬ, ರಮೇಶ್ ಭಟ್, ಜನಾರ್ಧನ್ ಆಚಾರ್ಯ, ಕೃಷ್ಣ ಆಚಾರ್ಯ ಹಾಗು ಶ್ರೀಮತಿ ಗೀತಾ ಆಚಾರ್ಯ. ನಮ್ಮ ಕಾರ್ಯಕ್ರಮಗಳಲ್ಲಿ ಅನೇಕ ವರ್ಷಗಳಿಂದ ವಿಶೇಷತೆ ಇರುವ ನೃತ್ಯಗಳನ್ನು ಮಾಡಿಸಿಕೊಂಡು ಬರುತ್ತಿರುವ ಶ್ರೀ ಗೋವಿಂದ್ ರಾಜ್ ಅವರ ನೃತ್ಯ ನಿರ್ದೇಶನದಲ್ಲಿ ಜನಪ್ರಿಯ ಜಾನಪದ ನೃತ್ಯ ಕೋಲಾಟವನ್ನು ಮಾಡಿ ತೋರಿಸಿದವರು ಶ್ರೀಮತಿಯರಾದ ಮೀನಾಕ್ಷಿ ಉಡುಪ, ವಿಜಯಾ ಭಟ್, ಪ್ರತಿಮಾ ಗಣೆಶ್, ಶ್ರೀಕಲಾ, ರೇಣುಕಾ ಕಿರಣ್, ಕೀರ್ತನಾ ಶರತ್, ಶ್ರೀಲಕ್ಷ್ಮಿ ದಾಸ್, ವಿದ್ಯಾ ರಾವ್, ಮೇಧಿನಿ ಕಲ್ಮಾಡಿ ಹಾಗು ಅರ್ಚನ ರಾವ್. ಶ್ರೀಮತಿ ಸಂಗೀತ ಶ್ರೀಪತಿಯವರ ನೃತ್ಯ ನಿರ್ದೇಶನದಲ್ಲಿ ಮತ್ತೆರಡು ನೃತ್ಯಗಳು ’ರಂಗಿನ ಹೂಗಳ ಬಣ್ಣದ ಲೋಕ’ ವನ್ನು ಕುಮಾರಿಯರಾದ ನಮ್ರತಾ ರಾವ್, ಸುಮಾ ಆರ್, ಪೂಜಾ ಆಚರ್ಯಾ, ಚೈತ್ರಾ ರಾವ್, ಶ್ರೀರಂಜಿನಿ, ಅಪೂರ್ವ, ಸುಶ್ಮಿತಾ ಹಾಗು ಶ್ರೀಮತಿ ಪ್ರಿಯಾ ದರ್ಶನ್ ಸೊಗಸಾಗಿ ತೆರೆದಿಟ್ಟರೆ, ’ಪ್ರೇಮದ ಹಕ್ಕಿಗಳು’ ಎಂಬ ನೃತ್ಯವನ್ನು ಶ್ರೀಮತಿ ಸಂಗೀತ ಶ್ರೀಪತಿ ಹಾಗು ಸುಮಾ ಆರ್. ಪ್ರಸ್ತುತ ಪಡಿಸಿದರು. ಇನ್ನು ವಾಯ್ಸ್ ಆಫ಼್ ಇಂಡಿಯಾ ಖ್ಯಾತೆಯ ರಿತಿಶಾ ಪದ್ಮನಾಭ್ ಅವರ ಗಾಯನ ಇಡೀ ಪುರಭವನದ ಸಭಿಕರನ್ನು ರೋಮಾಂಚನಗೊಳಿಸಿತು.
ಬಳಗದ ತರುಣ-ತರುಣೆಯರು ಹಲವಾರು ಪ್ರಾಕಾರದ ನೃತ್ಯಗಳಲ್ಲಿ ಪರಿಣಿತರು. ಇದನ್ನು ಅವರು ಕಳೆದ ಬಾರಿಯೇ ಸಾಬೀತು ಪಡಿಸಿದ್ದರು. ಅದನ್ನು ಈ ಬಾರಿ ಇನ್ನೂ ವಿಶೇಷತೆಯೊಂದಿಗೆ ನೃತರುತ್ಯ ತಂಡದ ಸದಸ್ಯ ಶ್ರೀ ರೋಹನ್ ರಾಜ್ ಅವರ ನೃತ್ಯ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದವರು ಅಜಯ್ ರಾವ್, ಆದಿತ್ಯ ಕಾವೂರ್, ಭರತ್ ಅಡಿಗ, ಪ್ರದ್ಯುಮ್ನ, ರೇಣುಕಾ ಕಿರಣ್, ಕೀರ್ತನಾ ಶರತ್, ಶ್ರೀಲಕ್ಶ್ಮಿ ದಾಸ್, ವಿದ್ಯಾ ರಾವ್, ಮೇಧಿನಿ ಕಲ್ಮಾಡಿ ಹಾಗು ಅರ್ಚನ ರಾವ್ ಮಹಾ ವಿಶ್ಣು ಕುರಿತ ಗೀತೆ ’ನಮೋ ನಮೋ’ ಮೂಲಕ. ನಮೋ ನಮೋ ನೃತ್ಯ ಸಾಂಸ್ಕೃತಿಕ ಸಂಜೆಯ ಮುಖ್ಯ ಆಕರ್ಷಣೆಯಾಗಿ ಹೊರ ಹಮ್ಮಿತು. ಕೊನೆಯದಾಗಿ ಪೂಜೆಯೊಂದಿಗೆ ಶ್ರೀ ವೆಂಕಟೇಶ್ವರನಿಗೆ ವೈಭವದ ಆರಾಧನೆಯನ್ನು ನಡೆಸಿಕೊಟ್ಟರು ಶ್ರೀ ಮಧುಸೂದನ್ ಕಾವೂರ್ ಹಾಗು ವೈ. ಜಯಂತ್ ರಾವ್. ಸಾಂಸ್ಕೃತಿಕ ಸಂಜೆಯಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ನೆನಪಿನ ಕೊಡುಗೆ ನೀಡಿದರು ಗಣೇಶ್ ಸ್ಟೀಲ್ ಸೆಂಟರ್ ನ ಮಾಲೀಕರಾದ ಶ್ರೀ ಭಾಸ್ಕರ್ ರಾವ್.
ಈ ಕಾರ್ಯಕ್ರಮವನ್ನು ಸಂಯೋಜಿಸಲು ಹಗಲು-ರಾತ್ರಿ ಶ್ರಮ ವಹಿಸಿ, ಕಲಾವಿದರಿಗೆ ಬೆನ್ನೆಲುಬಾಗಿ ನಿಂತ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷೆ ಶ್ರೀಮತಿ ಕಸ್ತೂರಿ ಐತಾಳ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ ಬಳಿಕ ಶಾಂತಿ ಮಂತ್ರವನ್ನು ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.
- ಸಾಂಸ್ಕೃತಿಕ ಸಮಿತಿಯ ಪರವಾಗಿ ಆದಿತ್ಯ ಕಾವೂರ್
December 11th, 2009 at 7:18 am
Samskruthika Saanja yellara prayathnadindagi Thumba chennagi banthu. Srimathi Kasturi Aithal abinandanarharu. Tandadavarige shubha kamanegalu. Kalavidarige ujvala bavishyavidhe. Nirupanege sogasu mudisida aditya hagu sahanarige shubhashirvadagalu. Varadi chennagi mudi bandide. Mundenu edannu munduvarise. Ranjithra kelasakke yellaru sahakarisona.
Abinandanegalondige
Nimmavane
Adiga K N
PRO ANANDA BALAGA