ವಿಜ್ರಂಭಣೆಯ ಗಣೇಶೋತ್ಸವ – 2017

 

ಆನಂದ ಬಳಗದ ಯುವ ವಿಭಾಗದ ನೇತೃತ್ವದಲ್ಲಿ ೨೦೧೭ರ ಆಗಸ್ಟ ೨೭ ಭಾನುವಾರದಂದು ಆನಂದ ಸಭಾಗೃಹದ ಸಂಭಾಂಗಣದಲ್ಲಿ ಬೆಳಗ್ಗೆ ೯:೩೦ ಘಂಟೆಗೆ ಶ್ರೀಯುತ ಡಿ ಶರತ್ ಕುಮಾರ ಭಟ್ ಪೌರೋಹಿತ್ಯದಲ್ಲಿ ಷಟ್ ನಾರೀ ಕೇಳ ಗಣ ಹೋಮವನ್ನು ಪ್ರಾರಂಬಿಸಿ ೧೧:೩೦ ಘಂಟೆಗೆ ಪೂರ್ಣಾಹುತಿ ಮಾಡಲಾಯಿತು.

ಬಳಗದ ಉತ್ಸಾಹಿ ಸದಸ್ಯರಿಂದ ಅಲಂಕೃತವಾದ ಶ್ರೀ ಗಣೇಶನ ವಿಗ್ರಹದ ಪ್ರತಿಷ್ಠಾಪನೆಯನ್ನು ಮಾಡಿ ನೆರೆದಿರುವ ಸದಸ್ಯರೆಲ್ಲರೂ ಸೇರಿ ವಿಷ್ಣು ಸಹಸ್ರನಾಮವನ್ನು ಪಠಿಸಲಾಯಿತು.

ತದನಂತರ ಯುವ ವಿಭಾಗದ ಸಂಚಾಲಕರಾದ ಶ್ರೀ ದಿನೇಶ್ ರಾವ್. ಎಂ ರವರು ಪುರೋಹಿತರನ್ನು ಅವರ ಸಹಪಾಠಿ ಶ್ರೀಯುತ ರಾಧಾಕೃಷ್ಣರನ್ನು ಹಾಗೂ ನೆರೆದಿರುವ ಎಲ್ಲಾ ಬಳಗದ ಸದಸ್ಯರುಗಳನ್ನು ಸ್ವಾಗತಿಸಿದರು.

ಆನಂದ ಬಳಗದ ಸಾಂಸ್ಕ್ರತಿಕ ವಿಭಾಗದ ಸಂಚಾಲಕರಾದ ಶ್ರೀ ರಮೇಶ್ ಭಟ್ ರವರು ನಮ್ಮ ಸದಸ್ಯರಾದ ಶ್ರೀ ಗುರುನಂದನ್ ರಾವ್ ರವರ ಧರ್ಮಪತ್ನಿ ಶ್ರೀಮತಿ ಶರಣ್ಯ ಕೆಮ್ಮಿಂಜೆ ಯವರನ್ನು ಸಭೆಗೆ ಪರಿಚಯಿಸಿ ಅವರಿಂದ ಸುಶ್ರಾವ್ಯವಾದ ದೇವರ ನಾಮಗಳನ್ನು ಸೇರಿದ ಸದಸ್ಯರು ಮಂತ್ರ ಮುಗ್ದರಾಗಿ ಕೇಳುವಂತೆ ಹಾಡಿಸಿದರು.

ಆನಂದ ಬಳಗದ ಸದಸ್ಯತ್ವ ಅಭಿಯಾನದ ಸಮಿತಿಯ ಸಂಚಾಲಕರಾದ ಶ್ರೀ ಗುರುಮೂರ್ತಿ ಯವರು ಪೌರೋಹಿತ್ಯದ ಸಂಪುರ್ಣ ಜವಾಬ್ದಾರಿ ವಹಿಸಿದ ಶ್ರೀಯುತ ಡಿ ಶರತ್ ಕುಮಾರ ಭಟ್, ಸಹಕಾರ ನೀಡಿದ ಶ್ರೀ ರಾಧಾಕೃಷ್ಣರವರಿಗೆ, ಇಂಪಾದ ಸ್ವರದಲ್ಲಿ ಹಾಡಿರುವ ಶ್ರೀಮತಿ ಶರಣ್ಯ ಕೆಮ್ಮಿಂಜೆ, ಛಾಯಾಗ್ರಾಹಕರಾದ ಶ್ರೀ ಬಾಲಕೃಷ್ಣ ಉಪಾದ್ಯಾಯರಿಗೂ ಹಾಗೂ ನೆರೆದಿರುವ ಎಲ್ಲಾ ಬಳಗದ ಸದಸ್ಯರಿಗೆ ವಂದನಾರ್ಪಣೆಯನ್ನು ಸಲ್ಲಿಸಿದರು .

ಬಳಗದ ಹಿತೈಷಿಗಳಾದ ಶ್ರೀಯುತ D.Y. ಮುರಳೀಧರ ರಾಯರಿಗೆ ಈ ಬಾರಿಯ ಗಣೇಶೋತ್ಸವದಂದು ಊಟದ ಪರಿಕರಗಳ ವ್ಯವಸ್ಥೆಯನ್ನು ಸೇವೆಯ ರೂಪದಲ್ಲಿ ನೀಡಿರುವುದಕ್ಕಾಗಿ ವಿಶೇಷವಾಗಿ ವಂದನಾರ್ಪಣೆಯನ್ನು ಮಾಡಿದರು.

ಚೆಂಡೆ ಘಂಟೆಗಳ ನಾದದೊಂದಿಗೆ ಪ್ರತಿಷ್ಠಾಪಿಸಿದ ಶ್ರೀ ಗಣೇಶ ಮೂರ್ತಿಗೆ ಮಂಗಳಾರತಿಯಾದ ನಂತರ ದೇವರ ಪ್ರಸಾದವನ್ನು ವಿತರಿಸಲಾಯಿತು.

ಶ್ರೀಯುತ ವೆಂಕಟರಾಜರಿಂದ ಪರಿಪಕ್ವವಾಗಿ ತಯಾರಿಸಿದ ಬೋಜನವನ್ನು ಸದಸ್ಯರೆಲ್ಲರೂ ಸವಿದ ನಂತರ ದೇವರು ಸಂತುಷ್ಟರಾಗಿ ಸುರಿಸಿದ ಮಳೆಯ ಮದ್ಯದಲ್ಲೇ ಮೆರವಣಿಗೆಯ ಮೂಲಕ ಸದಸ್ಯರಿಂದ ಶ್ರೀಗಳ ವಿಗ್ರಹವನ್ನು ವಿಸರ್ಜಸಲಾಯಿತು.

– ಶ್ರೀಮತಿ ಅಮಿತ ಡಿ. ರಾವ್

Subscribe Newsletter

Get latest updates of News and Evens from Ananda Balaga