ಅವನಿ ಕ್ಷೇತ್ರ ಪ್ರವಾಸ – ಒಂದು ಸುವರ್ಣ ಅನುಭವ
ಆನಂದ ಬಳಗ (ರಿ) ಸಾಂಸ್ಕೃತಿಕ ಸಮಿತಿ
ಸಂಚಾಲಕಿ: ಶ್ರೀಮತಿ ಕಸ್ತೂರಿ ಐತಾಳ್
ಹೆಸರಿಗೆ ಒಪ್ಪುವಂತೆ ತನ್ನ ಬಳಗವನ್ನು ಆನಂದಗೊಳಿಸಲು ಸಾಂಸ್ಕೃತಿಕ ಸಮಿತಿಯು ಹಲವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮನೋಲ್ಲಾಸಕ್ಕಾಗಿ ವಾರ್ಷಿಕ ಪ್ರವಾಸವನ್ನು ಕೋಲಾರ ಜಿಲ್ಲೆಯ ಅವನಿ ಕ್ಷೇತ್ರಕ್ಕೆ ತಾ. ೨೫-೧೨-೨೦೦೯ ರಂದು ಆಯೋಜಿಸಿತ್ತು. ಬೆಳಗಿನ ಚುಮು ಚುಮು ಚಳಿ ಇದ್ದರೂ ತುಂಬು ಹರ್ಷದಿಂದ ಪ್ರವಾಸಿಗರು ೬ಗಂಟೆಗೆ ಶೇಷಾದ್ರಿಪುರಂನಲ್ಲಿ ಒಟ್ಟುಗೂಡಿದ್ದರು. ಶ್ರೀಮತಿ ಕಸ್ತೂರಿ ಐತಾಳ್ ಅವರ ನೇತ್ರತ್ವದಲ್ಲಿ ಪ್ರವಾಸಿ ಯುವ ದಂಪತಿಗಳಿಂದ ವಾಹನ ಪೂಜೆ ನಡೆದು ಎಲ್ಲರು ಬಸ್ಸನ್ನೇರಿ ಸೂಕ್ತವೆನಿಸಿದ ಕುರ್ಚಿಯಲ್ಲಿ ಆಸೀನರಾದರು. ಶ್ರೀಯುತ ವಿಶ್ಣುಮೂರ್ತಿ ಅವರು ಎಲ್ಲರನ್ನು ಉತ್ತೇಜಿಸುವ ಉತ್ಸಾಹದಲ್ಲಿದ್ದರು. ಶ್ರೀಮತಿ ಶ್ರೀಲಕ್ಶ್ಮಿ ದಾಸ್ ಅವರ ಪ್ರಾರ್ಥನೆಯೊಂದಿಗೆ ಶುರುವಾಗಿ ಎಲ್ಲ ಸದಸ್ಯರು ಒಬ್ಬೊಬ್ಬರಾಗಿ ತಮ್ಮ ಪರಿಚಯ-ಇರುವಿಕೆಯನ್ನು ಪ್ರಕಟಿಸಿದರು. ಮುಂದೆ ಬಸ್ಸು ಕೋಲಾರದತ್ತ ಮುಂದುವರಿದಂತೆಲ್ಲ ಕೆಲವರು ಅಂತಾಕ್ಶರಿಯಲ್ಲಿ ಮಗ್ನರಾಗಿದ್ದರೆ, ಇನ್ನು ಕೆಲವರು ಜೊಕುಗಳನ್ನು ಹೇಳುವುದರಲ್ಲಿ ತಲ್ಲೀನರಾಗಿದ್ದರು.
ಈ ಸಮಯಕ್ಕೆ ಬಿಸಿ ಬಿಸಿ ಇಡ್ಲಿ ಸಾಂಬಾರ್, ಕ್ಯರೇಟ್ ಹಲ್ವ, ಉಪ್ಪಿಟ್ಟು , ಕಾಫಿ ಎಲ್ಲರನ್ನು ಚುರುಕುಗೊಳಿಸಿತು. ಈ ಎಲ್ಲವನ್ನು ಮುಗಿಸಿ, ಪ್ರಯಾಣ ಮುಂದುವರಿಸಿ ಮೊದಲ ದರ್ಶನ ತಾಣ ಬೆಟ್ಟದ ಬುಡದಲ್ಲಿ ಶ್ರೀ ಶಾರದಾಂಬ ದೇವಸ್ಥಾನ ಹಾಗು ಅವನಿ ಶಂಕರಮಠ ತಲುಪುವಾಗ ಸಮಯ ೧೧ಗಂಟೆ. ಬೆಟ್ಟದ ನೆತ್ತಿಯಲ್ಲಿ ಸೀತಾ ಮಾತೆಯ ಮಂದಿರವಿದೆ. ಇವೆರಡನ್ನು ಜೋಡಿಸಲು ಸುಮಾರು ೨೮೦೦ರಷ್ಟು ಮೆಟ್ಟಲುಗಳಿವೆ. ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಸಮೂಹಿಕ ಪೂಜೆ ಸಲ್ಲಿಸಿ ಕ್ಷೇತ್ರದ ಪೂಜಾರಿಗಳಿಂದ ಸ್ಥಳಪುರಾಣದ ಪ್ರವಚನವನು ಕೇಳಿ ಅವನಿ ಕ್ಷೇತ್ರ ಮೂಲತಹ ’ಅವಂತಿ ಕ್ಷೇತ್ರ’ ಎಂದಾಗಿದ್ದು ೧೦ನೇಯ ಶತಮಾನದಲ್ಲಿ ರುದ್ರ ಭಟ್ಟಾರಕರೆಂಬ ತಪೋಧನರು ನಡೆಸಿದ ಯಾಗದ ಕಾರಣ ಹಾಗೆ ಕರೆಯಲ್ಪಟ್ಟಿತೆಂದು ತಿಳಿದುಬಂತು. ಇಲ್ಲಿ ಸೀತಾ ದೇವಿಯು ಕುಳಿತುಕೊಳ್ಳುತಿದ್ದ ’ತೊಟ್ಟಿಲ ಗುಂಡು’, ಶ್ರೀ ವಾಲ್ಮೀಕಿ ಮಹರ್ಶಿಗಳ ಆಶ್ರಮ, ಲವ-ಕುಶರ ಗುಡಿಯೂ ಇದೆ. ಇಲ್ಲಿಯೇ ಲವ-ಕುಶರು ಜನ್ಮತಾಳಿ ಬಾಲ್ಯ ಕಳೆದರೆಂದು ಪ್ರರೇತಿ. ಸೀತಾ ಮಾತೆ ಹಾಗು ಶ್ರೀ ರಾಮರು ಏಕಾಂತದಲ್ಲಿ ಇರುತ್ತಿದ್ದರೆನ್ನಲಾದ ಸ್ಥಳವು ಇಲ್ಲಿಯೇ ಬೆಟ್ಟದ ಮಾರ್ಗದಲ್ಲಿದೆ. ಇಲ್ಲಿರುವ ಗುಹೆಯೊಂದರಲ್ಲಿ ಕಾಣಬಲ್ಲ ಪಂಚಲಿಂಗಗಳನ್ನು ಪಂಚಪಾಂಡವರರೆ ಪ್ರತಿಷ್ಟಾಪಿಸಿದರೆನ್ನುವ ನಂಬಿಕೆ. ಇವುಗಳಲ್ಲದೆ ಹೊರಳುಗುಂಡು, ಕುದುರೆಗುಂಡು, ಅಗ್ನಿತೀರ್ಥ, ಅಂತರ್ಗಂಗೆ ನೋಡಲಿರುವ ಸ್ಥಳಗಳು. ಹೊರಳುಗುಂಡುವಿನ ಬುಡದಲ್ಲಿ ಒಬ್ಬ ಮನುಶ್ಯ ಹೊಗಬಹುದಾದಶ್ಟು ಸ್ಥಳವಿದ್ದು ಕೆಲವು ಸದಸ್ಯರು ಹೊರಳು ಸೇವೆ ನಡೆಸಿದರು.
ನಾವು ಬೆಟ್ಟ ಇಳಿದು ಶಂಕರಮಠ ತಲುಪಿದಾಗ ಸಮಯ ೧ಗಂಠೆ. ಹಸಿವಿಗೆ ತಕ್ಕಂತೆ ಹೋಳಿಗೆ, ಬಿಸಿಬೇಳೇಬಾತು, ಡ್ರೈ ಫ಼್ರೂಟ್ ಲಾಡು, ಸಾರನ್ನ ಮೊಸರನ್ನದ ಸುಗ್ರಾಸ ಭೋಜನ. ಸಂಪ್ರದಾಯದಂತೆ ಹರಗೋವಿಂದಾ ಹೇಳಿದ್ದು ಮತ್ತು ಚೂರ್ಣಿಕ ಹಾಡಿದ್ದು ನಮ್ಮ ಮೂಲ ಬೇರನ್ನು ನೆನಪಿಸಿದವು. ಅವನಿಯಿಂದ ಸೀದ ಬಂಗಾರ ತಿರುಪತಿಗೆ ಬಂದು ಅಲ್ಲಿ ವೈಕುಂಟ ಏಕಾದಶಿಯ ಸಲುವಾಗಿ ಸಲ್ಲಿದ ಶ್ರೀ ವೆಂಕಟೇಶ್ವರ-ಪದ್ಮಾವತಿ ಅಮ್ಮನವರ ದರ್ಶನ ಎಲ್ಲರಿಗೂ ಸಂತೊಷ ತಂದಿತು. ವಾಪಸ್ ಬರುತ್ತ ಶ್ರೀ ರಾಮ ಲಿಂಗೇಶ್ವರ, ಲಕ್ಷ್ಮಣ ಲಿಂಗೇಶ್ವರ, ಭರಥೇಶ್ವರ, ಶತ್ರುಗ್ನೇಶ್ವರ ದೇವಾಲಯಗಳನ್ನು ಸಂದರ್ಶಿಸಿದೆವು. ಈ ದೇವಾಲಯಗಳಲ್ಲಿ ಕೆಲವು ಭೀಮ ಗಾತ್ರದ ಅಂಗಗಳು ಪ್ರತಿಶ್ಟಾಪಿಸಲ್ಪಟ್ಟಿದ್ದು ಶ್ರೀ ಬೃಹದೀಶ್ವರನನ್ನು ನೆನಪಿಗೆ ತಂದವು. ಪ್ರಮುಖ ಮಾಧ್ವಕ್ಷೇಂದ್ರಗಳಲ್ಲೋಂದಾದ ಮುಳುಬಾಗಿಲಿನಲ್ಲಿ ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದು ಪರಿಸರದಲ್ಲಿರುವ ಕಂಚಿನ ಹಲ್ಲಿಯನ್ನು ಸ್ಪರ್ಷಿಸಿ ತತ್ಸಂಬಂಧ ದೋಶಗಳು ನಿವಾರಣೆ ಆಯ್ತ್ಂದುಕೊಂದರು. ಮುಂದೆ ಬರುತ್ತ ಮಾರ್ಗದಲ್ಲಿ ಇಳಿದು ಟೀಕಾಣಿ ಹಾಕಿ ಸಯಂಕಾಲದ ಉಪಾಹಾರವನ್ನು ಮುಗಿಸಿದೆವು. ಈ ಸಂಧರ್ಬದಲ್ಲಿ ಶ್ರೀ ಕೆ. ಎನ್. ಅಡಿಗರು ಬಳಗದ ಪ್ರವಾಸ ಕಾರ್ಯಕ್ರಮಗಳು ಆನಂದ ಬಳಗದ ಧ್ಯೇಯಕ್ಕೆ ಪೂರಕವಾಗಿದೆ ಎಂಬುದನ್ನು ವಿಶೇಷತೆಯಿಂದ ವ್ಯಕ್ತಪಡಿಸಿದರು. ಬೆಳದಿಂಗಳು ಅಣಿಯಾದಂತೆ ಶಾವಿಗೆಬಾತ್ ಹಾಗು ಚಹ ಸೇವನೆ ಮುಗಿಸಿ ಪುನಃ ಬಸ್ಸನ್ನೇರಿ ಮರು ಪ್ರಯಾಣ. ಸಾಲದ್ದಕ್ಕೆ ೮ಗಂಟೆಗೆ ಮೂರ್ತಿಯವರು ಊರಿನ ಬನ್ಸ್, ಅವರೆಕಾಳು ಪೊಟ್ಟಣವನ್ನು ಎಲ್ಲರಿಗು ಹಂಚಿದರು. ಪ್ರವಾಸಕ್ಕೆ ಬೇಕಾದ ಉಪಹಾರ ಮತ್ತು ಊಟದ ಕೀರ್ತಿ ಶ್ರೀ ವೆಂಕಟ್ ರಾಜ್ ಅವರಿಗೆ ಸಲ್ಲುತ್ತದೆ. ಸುಖಪ್ರಯಾಣ ಮುಗಿಸಿ ನಾವು ಮೂಲ ಸ್ಥಾನ ಶೇಷಾದ್ರಿಪುರಂಗೆ ಬಂದಾಗ ರಾತ್ರಿ ೧೦ಗಂಟೆ. ಸಾಂಸ್ಕೃತಿಕ ಸಮಿತಿಯ ಆಯೊಜಕರ ಶ್ರಮ ಸಾರ್ಥಕವೆನಿಸಿತು. ಎಲ್ಲರ ಮುಖದಲ್ಲಿಯೂ ನಲಿವಿತ್ತು. ನೆನಪಿಸಿಕೊಳಲ್ಲು ಬಹಳಷ್ಟಿತ್ತು.
- ಸಾಂಸ್ಕೃತಿಕ ಸಮಿತಿಯ ಪರವಾಗಿ ವಾಕ್ವಾಡಿ ನರಸಿಂಹ ಹೊಳ್ಳ.

January 5th, 2010 at 10:52 am
Trip photos and article is good except some of the spelling mistakes in the article.
January 6th, 2010 at 5:47 pm
Good attempt to put the report immediately after the trip.But in the enthusiasm,a lot of spelling mistakes were krept in to the text. this will send a wrong signal on AB. Pl avoid in future. If possible replace the matter. Regards.